Victory Vijay: ಲೈಟ್ಸ್, ಕ್ಯಾಮೆರಾ ಆನ್, ಆ್ಯಕ್ಷನ್: ತಮಿಳುನಾಡಿನಲ್ಲಿ ಇತಿಹಾಸ ಬರೆದ ಟಿವಿ ಕೆ! 108 ಸ್ಥಾನಗಳಲ್ಲಿ ಜಯಭೇರಿ – ಮುಂದಿನ ಸಿಎಂ ‘ದಳಪತಿ’?
ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ದಶಕಗಳ ಕಾಲ ದ್ರಾವಿಡ ಪಕ್ಷಗಳಾದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ನಡುವೆ ನಡೆಯುತ್ತಿದ್ದ ಜಿದ್ದಾಜಿದ್ದಿಗೆ ಬ್ರೇಕ್ ಹಾಕಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK), ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ.
ಬೆಳ್ಳಿತೆರೆಯ ಮೇಲೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸುತ್ತಿದ್ದ ‘ಥಲಪತಿ’ ವಿಜಯ್, ಈಗ ರಾಜಕೀಯ ರಣರಂಗದಲ್ಲಿ ವಿರೋಧಿಗಳ ಕೋಟೆಯನ್ನು ಧೂಳೀಪಟ ಮಾಡಿದ್ದಾರೆ. ಲೈಟ್ಸ್ ಮತ್ತು ಕ್ಯಾಮೆರಾ ಆನ್ ಆಗುತ್ತಿದ್ದಂತೆ ವಿಜಯ್ ಎಂಬ ಮಾಸ್ ಲೀಡರ್ ಎದುರು ಘಟಾನುಘಟಿಗಳೇ ಮಂಕಾಗಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) 108 ಸ್ಥಾನಗಳನ್ನು ಗೆದ್ದು ಹೊಸ ಇತಿಹಾಸ ಬರೆದಿದೆ.

ಎರಡೂ ಕ್ಷೇತ್ರಗಳಲ್ಲಿ ‘ದಳಪತಿ’ ವಿಶ್ವರೂಪ: ಪೆರಂಬೂರ್ ಮತ್ತು ತಿರುಚಿ ಈಸ್ಟ್ ಕ್ಲೀನ್ ಸ್ವೀಪ್!
ವಿಜಯ್ ಅವರು ಸ್ಪರ್ಧಿಸಿದ್ದ ಪೆರಂಬೂರ್ (Perambur) ಮತ್ತು ತಿರುಚಿ ಈಸ್ಟ್ (Tiruchi East) ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಪೆರಂಬೂರ್‌ನಲ್ಲಿ ಸುಮಾರು 53,000ಕ್ಕೂ ಅಧಿಕ ಮತಗಳ ಬೃಹತ್ ಅಂತರದಿಂದ ಗೆದ್ದಿರುವ ವಿಜಯ್, ತಮ್ಮ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯ ಕಾರ್ಯಕರ್ತನಿಗೆ ಮನ್ನಣೆ: ಕಾರು ಚಾಲಕನ ಮಗ ಶಬರಿನಾಥನ್ ಐತಿಹಾಸಿಕ ಜಯ!
ಈ ಬಾರಿಯ ಚುನಾವಣೆಯ ಅತ್ಯಂತ ಭಾವುಕ ಸುದ್ದಿ ಎಂದರೆ ವಿರುಗಂಬಾಕ್ಕಂ (Virugampakkam) ಕ್ಷೇತ್ರದ ಫಲಿತಾಂಶ. ವಿಜಯ್ ಅವರ ಆಪ್ತ ಕಾರು ಚಾಲಕ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್. ಆರ್ (Sabarinathan R), ಡಿಎಂಕೆ ಅಭ್ಯರ್ಥಿಯನ್ನು 27,086 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ತಳಮಟ್ಟದ ಕಾರ್ಯಕರ್ತನಿಗೂ ಅಧಿಕಾರ ನೀಡುವ ಮೂಲಕ ವಿಜಯ್ ರಾಜಕೀಯದಲ್ಲಿ ಹೊಸ ಬದಲಾವಣೆ ತಂದಿದ್ದಾರೆ.

PC: PTI, Source: ECI.
ಸರ್ಕಾರ ರಚನೆಗೆ ‘118’ ಮ್ಯಾಜಿಕ್ ನಂಬರ್: ಬಹುಮತದ ಹೊಸ್ತಿಲಲ್ಲಿ ವಿಜಯ್!
ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ 118 ಸ್ಥಾನಗಳ ಸ್ಪಷ್ಟ ಬಹುಮತದ ಅಗತ್ಯವಿದೆ. ಪ್ರಸ್ತುತ ವಿಜಯ್ ಅವರ ಟಿವಿ ಕೆ ಪಕ್ಷ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದ್ದು, ಮುಂದಿನ ಸಿಎಂ ಆಗಿ ಅಧಿಕಾರ ಹಿಡಿಯಲು ವಿಜಯ್ ಅವರು ಎಐಎಡಿಎಂಕೆ (AIADMK) ಅಥವಾ ಪಕ್ಷೇತರರ ಬೆಂಬಲ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಗೆಲುವಿನೊಂದಿಗೆ ದ್ರಾವಿಡ ಪಕ್ಷಗಳ ಅರ್ಧ ಶತಮಾನದ ಏಕಾಧಿಪತ್ಯಕ್ಕೆ ವಿಜಯ್ ಅಂತ್ಯ ಹಾಡಿದ್ದಾರೆ.
ಸ್ಟಾಲಿನ್ ಪರಾಭವ: ವಿಜಯ್ ಸೈಲೆಂಟ್ ರಿವೇಂಜ್!
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಭದ್ರಕೋಟೆಯಾದ ಕೊಳತ್ತೂರು ಕ್ಷೇತ್ರದಲ್ಲೇ ಟಿವಿ ಕೆ ಅಭ್ಯರ್ಥಿ ಎದುರು ಸೋತಿರುವುದು ಈ ಚುನಾವಣೆಯ ದೊಡ್ಡ ಆಘಾತಕಾರಿ ಬೆಳವಣಿಗೆ. ಈ ಮೂಲಕ ವಿಜಯ್ ರಾಜಕೀಯವಾಗಿ ತಮಗೆ ಎದುರಾಗಿದ್ದ ಟೀಕೆಗಳಿಗೆ ‘ಸೈಲೆಂಟ್’ ಆಗಿಯೇ ಸೇಡು ತೀರಿಸಿಕೊಂಡಿದ್ದಾರೆ. ತಮಿಳುನಾಡಿನ ಯುವಶಕ್ತಿ ಮತ್ತು ಅಭಿಮಾನಿಗಳು ದಳಪತಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಕಾತರರಾಗಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: