ಬಿಜೆಪಿ ನೂತನ ರಾಷ್ಟ್ರೀಯ ತಂಡ: ಹಿರಿಯರಿಗೆ ಶಾಕ್, ಯುವ ಪಡೆಗೆ ಚಾನ್ಸ್!
ವರದಿಗಾರರು (Reporter)
Hemanth Rajashekar07:33 AM IST

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೊಸ ಮೆರುಗು ನೀಡುವ ಉದ್ದೇಶದಿಂದ ಅತ್ಯಂತ ಪ್ರಮುಖವಾದ ಹಾಗೂ ತೀವ್ರ ಕುತೂಹಲ ಕೆರಳಿಸಿದ್ದ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಈ ಹೊಸ ತಂಡ ರಚನೆಯಾಗಿದ್ದು, ಅನುಭವ ಹಾಗೂ ಯುವ ನಾಯಕತ್ವದ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಮುಂಬರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ ಪಕ್ಷದ ಬಲವರ್ಧನೆಯನ್ನು ಗಮನದಲ್ಲಿಟ್ಟುಕೊಂಡು ಈ ಬೃಹತ್ ಬದಲಾವಣೆ ಮಾಡಲಾಗಿದೆ.
ಈ ಹೊಸ ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಮಹತ್ವದ ಜವಾಬ್ದಾರಿ ಸಿಕ್ಕಿದ್ದರೆ, ಹಲವಾರು ಹಿರಿಯ ನಾಯಕರನ್ನು ಹೊಸ ಹುದ್ದೆಗಳಿಗೆ ಬಡ್ತಿ ಮಾಡಲಾಗಿದೆ. ಅದೇ ಸಮಯದಲ್ಲಿ ದೀರ್ಘ ಕಾಲದಿಂದ ಪಕ್ಷದಲ್ಲಿದ್ದ ಪ್ರಮುಖ ನಾಯಕರಿಗೆ ಪದಾಧಿಕಾರಿಗಳ ಹುದ್ದೆಯಿಂದ ಕೊಕ್ ನೀಡಲಾಗಿದೆ. ನೂತನ ತಂಡದಲ್ಲಿ 10 ಮಹಿಳಾ ನಾಯಕಿಯರು ಹಾಗೂ 6 ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ.

ನೂತನ ತಂಡಕ್ಕೆ ಸೇರ್ಪಡೆಗೊಂಡವರು ಮತ್ತು ಪ್ರಮುಖ ಹುದ್ದೆ ಪಡೆದವರು
ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡದಲ್ಲಿ ಹಲವು ಪ್ರಮುಖ ನಾಯಕರು ಪ್ರಮುಖ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ:
- ಸ್ಮೃತಿ ಇರಾನಿ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಮಹತ್ವದ ಹುದ್ದೆಗೆ ನೇಮಕ)
- ವಸುಂಧರಾ ರಾಜೇ ಸಿಂಧಿಯಾ: ರಾಷ್ಟ್ರೀಯ ಉಪಾಧ್ಯಕ್ಷೆ (ಸ್ಥಾನ ಉಳಿಸಿಕೊಂಡಿದ್ದಾರೆ)
- ಡಿ. ಪುರಂದೇಶ್ವರಿ: ರಾಷ್ಟ್ರೀಯ ಉಪಾಧ್ಯಕ್ಷೆ
- ರೇಖಾ ವರ್ಮಾ: ರಾಷ್ಟ್ರೀಯ ಉಪಾಧ್ಯಕ್ಷೆ (ಸ್ಥಾನ ಉಳಿಸಿಕೊಂಡಿದ್ದಾರೆ)
- ಬೈಜಯಂತ್ ಪಾಂಡಾ: ರಾಷ್ಟ್ರೀಯ ಉಪಾಧ್ಯಕ್ಷರು (ಸ್ಥಾನ ಉಳಿಸಿಕೊಂಡಿದ್ದಾರೆ)
- ತಾರಿಕ್ ಮನ್ಸೂರ್: ರಾಷ್ಟ್ರೀಯ ಉಪಾಧ್ಯಕ್ಷರು (ಸ್ಥಾನ ಉಳಿಸಿಕೊಂಡಿದ್ದಾರೆ)
- ಲಾಲ್ ಸಿಂಗ್ ಆರ್ಯ: ರಾಷ್ಟ್ರೀಯ ಉಪಾಧ್ಯಕ್ಷರು (ಎಸ್ಸಿ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಬಡ್ತಿ)
- ಸೌದಾನ್ ಸಿಂಗ್: ರಾಷ್ಟ್ರೀಯ ಸಹ-ಸಂಘಟನಾ ಪ್ರಧಾನ ಕಾರ್ಯದರ್ಶಿ
- ಶಿವಪ್ರಕಾಶ್: ರಾಷ್ಟ್ರೀಯ ಸಹ-ಸಂಘಟನಾ ಪ್ರಧಾನ ಕಾರ್ಯದರ್ಶಿ (ಸ್ಥಾನ ಉಳಿಸಿಕೊಂಡಿದ್ದಾರೆ)
- ಹರೀಶ್ ದ್ವಿವೇದಿ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಬಡ್ತಿ)
- ವಿನೋದ್ ತಾವ್ಡೆ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸ್ಥಾನ ಉಳಿಸಿಕೊಂಡಿದ್ದಾರೆ)
- ಸುನಿಲ್ ಬನ್ಸಲ್: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸ್ಥಾನ ಉಳಿಸಿಕೊಂಡಿದ್ದಾರೆ)
- ಪಿಯೂಷ್ ಗೋಯಲ್: ರಾಷ್ಟ್ರೀಯ ಖಜಾಂಚಿ (ಮತ್ತೆ ಹಳೆಯ ಹುದ್ದೆಗೆ ಪುನರಾಗಮನ)
- ಕವಿತಾ ಪಟೀದಾರ್: ರಾಷ್ಟ್ರೀಯ ಕಾರ್ಯದರ್ಶಿ
- ಸಂಗೀತಾ ಯಾದವ್: ರಾಷ್ಟ್ರೀಯ ಕಾರ್ಯದರ್ಶಿ
- ರೂಪ್ ಕುಮಾರಿ ಚೌಧರಿ: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ
- ಪ್ರೀತಿ ಗಾಂಧಿ: ಸೋಶಿಯಲ್ ಮೀಡಿಯಾ ಸಹ-ಸಂಚಾಲಕಿ
- ತರುಣ್ ಚುಗ್: ರಾಷ್ಟ್ರೀಯ ಕಚೇರಿ ಉಸ್ತುವಾರಿ
- ರಿತುರಾಜ್ ಸಿನ್ಹಾ: ಪ್ರಕೋಷ್ಟ ಸಂಕುಲ್ ಸಹ-ಸಂಚಾಲಕ
- ಪ್ರದೀಪ್ ಭಂಡಾರಿ: ಮಾಧ್ಯಮ ಸಹ-ಸಂಚಾಲಕ (ರಾಷ್ಟ್ರೀಯ ವಕ್ತಾರ ಹುದ್ದೆಯಿಂದ ಬಡ್ತಿ)
- ಸಿದ್ಧಾರ್ಥ್ ಯಾದವ್: ಮಾಧ್ಯಮ ಸಹ-ಸಂಚಾಲಕ (ರಾಷ್ಟ್ರೀಯ ವಕ್ತಾರ ಹುದ್ದೆಯಿಂದ ಬಡ್ತಿ)

ತಂಡದಿಂದ ಹೊರಬಿದ್ದ ನಾಯಕರು
ಪಕ್ಷದ ಪುನಾರಚನೆಯಲ್ಲಿ ಹಲವು ಹಿರಿಯ ನಾಯಕರು ಹಾಗೂ ಪ್ರಮುಖ ಸಂಘಟಕರನ್ನು ಈ ಬಾರಿಯ ಪದಾಧಿಕಾರಿಗಳ ಪಟ್ಟಿಯಿಂದ ಕೈಬಿಡಲಾಗಿದೆ:
- ಅರುಣ್ ಸಿಂಗ್: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ
- ದುಶ್ಯಂತ್ ಗೌತಮ್: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ
- ರಾಧಾ ಮೋಹನ್ ದಾಸ್ ಅಗರ್ವಾಲ್: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ
- ಸರೋಜಾ ಪಾಂಡೆ: ರಾಷ್ಟ್ರೀಯ ಉಪಾಧ್ಯಕ್ಷೆ ಹುದ್ದೆಯಿಂದ ವಜಾ
- ಡಿ.ಕೆ. ಅರುಣಾ: ರಾಷ್ಟ್ರೀಯ ಉಪಾಧ್ಯಕ್ಷೆ ಹುದ್ದೆಯಿಂದ ವಜಾ
- ಎಮ್. ಚುಬಾ ಆವೋ: ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯಿಂದ ವಜಾ
- ಅಬ್ದುಲ್ಲಾ ಕುಟ್ಟಿ: ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯಿಂದ ವಜಾ
- ಲಕ್ಷ್ಮೀಕಾಂತ ವಾಜಪೇಯಿ: ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯಿಂದ ವಜಾ
- ಲತಾ ಉಸೇಂಡಿ: ರಾಷ್ಟ್ರೀಯ ಉಪಾಧ್ಯಕ್ಷೆ ಹುದ್ದೆಯಿಂದ ವಜಾ
- ಅರವಿಂದ್ ಮೆನನ್, ಪಂಕಜಾ ಮುಂಡೆ, ಅಲ್ಕಾ ಗುರ್ಜಾರ್, ಓಂ ಪ್ರಕಾಶ್ ಧುರ್ವೆ, ನರೇಂದ್ರ ಸಿಂಗ್, ಕಾಮಾಖ್ಯಾ ಪ್ರಸಾದ್ ತಾಸಾ, ಸುರೇಂದ್ರ ನಾಗರ್, ಓಂ ಪ್ರಕಾಶ್ ಧನಕ್, ಮಂಜಿಂದರ್ ಸಿಂಗ್ ಸಿರ್ಸಾ: ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗಳಿಂದ ವಜಾ
- ರಾಜೇಶ್ ಅಗರ್ವಾಲ್: ಖಜಾಂಚಿ ಹುದ್ದೆಯಿಂದ ವಜಾ
- ನರೇಶ್ ಬನ್ಸಲ್: ಸಹ-ಖಜಾಂಚಿ ಹುದ್ದೆಯಿಂದ ವಜಾ
- ಅಮಿತ್ ಮಾಳವೀಯ: ಐಟಿ ಸೆಲ್ ಸಂಚಾಲಕ ಹುದ್ದೆಯಿಂದ ವಜಾ
- ಸಂಜಯ್ ಮಯೂಖ್: ಮಾಧ್ಯಮ ಘಟಕದ ಸಹ-ಸಂಚಾಲಕ ಹುದ್ದೆಯಿಂದ ವಜಾ
ಹುಬ್ಬಳ್ಳಿಯ ರಾಜ್ಯಸಭಾ ಎಂಪಿ ಎಂ. ನಾಗರಾಜ್‌ಗೆ ಒಲಿದ ರಾಷ್ಟ್ರೀಯ ಉಪಾಧ್ಯಕ್ಷ ಪಟ್ಟ:
ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿರುವ ಎಂ. ನಾಗರಾಜ್ ಅವರಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ:
“ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಜಿ ಅವರಿಗೆ ನಾನು ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ಅಮಿತ್ ಶಾ ಜಿ ಅವರಿಗೂ ನನ್ನ ಕೃತಜ್ಞತೆಗಳು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಜಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜಿ ಅವರಿಗೆ ವಿಶೇಷ ಧನ್ಯವಾದಗಳು. ನಿತಿನ್ ನಬಿನ್ ಜಿ ಅವರು ಅತ್ಯಂತ ವಿಶ್ವಾಸದಿಂದ ನನಗೆ ಈ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದಾರೆ. ಇದು ನನಗೂ ಮತ್ತು ಕರ್ನಾಟಕಕ್ಕೂ ಸಿಕ್ಕ ದೊಡ್ಡ ಜವಾಬ್ದಾರಿಯಾಗಿದೆ. ಕರ್ನಾಟಕದ ಎಲ್ಲಾ ಕಾರ್ಯಕರ್ತರೊಂದಿಗೆ ಸೇರಿ ಶ್ರಮಿಸುತ್ತೇನೆ. ವಿಕಸಿತ ಭಾರತ 2047ರ ಗುರಿಯತ್ತ ನಾವೆಲ್ಲರೂ ಸರಿಯಾದ ಹಾದಿಯಲ್ಲಿ ಸಾಗಲಿದ್ದೇವೆ.”
ನಿತಿನ್ ನಬಿನ್ ಅವರ ಈ ಹೊಸ ಪಡೆ ಮುಂಬರುವ ರಾಜಕೀಯ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಕಳಪೆ ಆಹಾರ, ನಕಲಿ ಔಷಧಿಗೆ ಬೀಳಲಿದೆ ಬ್ರೇಕ್: ಕರ್ನಾಟಕದಲ್ಲಿ ಜಾರಿಯಾಯ್ತು ‘QR ಕೋಡ್’ ದೂರು ವ್ಯವಸ್ಥೆ ಜಾರಿ.