ಕೇಂದ್ರ ಸರ್ಕಾರಿ ಉದ್ಯೋಗಾವಕಾಶ: ಯುಪಿಎಸ್‌ಸಿ ವತಿಯಿಂದ ವಿವಿಧ ಹುದ್ದೆಗಳ ನೇರ ನೇಮಕಾತಿ — ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
ವರದಿಗಾರರು (Reporter)
Hemanth Rajashekar06:33 AM IST

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೇಂದ್ರ ಲೋಕಸೇವಾ ಆಯೋಗ (UPSC) ಬೃಹತ್ ನೇರ ನೇಮಕಾತಿ ಚಾಲನೆ ನೀಡಿದೆ. ದೇಶಾದ್ಯಂತ ಇರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಯುಪಿಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಜಾಹೀರಾತು ಸಂಖ್ಯೆ 09/2026 ಹಾಗೂ ವಿಶೇಷ ಜಾಹೀರಾತು ಸಂಖ್ಯೆ 51/2026 ಅನ್ನು ಪ್ರಕಟಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ನಿಯಮಾವಳಿಗಳ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಮುಖ್ಯ ದಿನಾಂಕಗಳು ಮತ್ತು ಅರ್ಜಿ ವಿವರಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25 ಜುಲೈ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಆಗಸ್ಟ್ 2026
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ
ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಆನ್‌ಲೈನ್ ರಿಕ್ರೂಟ್‌ಮೆಂಟ್ ಅಪ್ಲಿಕೇಶನ್ (ORA) ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ಸೂಚನೆಗಳು
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಯುಪಿಎಸ್‌ಸಿ ಪ್ರಕಟಿಸಿರುವ ಅಧಿಕೃತ ಜಾಹೀರಾತು ಸೂಚನೆಗಳನ್ನು ವಿವರವಾಗಿ ಓದಿಕೊಳ್ಳಲು ಕೋರಲಾಗಿದೆ.
- ಆನ್‌ಲೈನ್ ನೋಂದಣಿ: ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ORA ಪೋರ್ಟಲ್‌ನಲ್ಲಿ ‘One Time Registration’ (OTR) ಪೂರ್ಣಗೊಳಿಸಬೇಕು.
- ಮಾಹಿತಿ ಪರಿಶೀಲನೆ: ಜಾಹೀರಾತು ಸಂಖ್ಯೆ 09/2026 ಮತ್ತು 51/2026 ರಲ್ಲಿ ನೀಡಿರುವ ಹುದ್ದೆಗಳ ಅಗತ್ಯ ವಿದ್ಯಾರ್ಹತೆ ಮತ್ತು ಅನುಭವದ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
- ಸಮಯಕ್ಕೆ ಮುಂಚಿತವಾಗಿ ಅರ್ಜಿ ಹಾಕಿ: ಕೊನೆಯ ದಿನದವರೆಗೆ ಕಾಯದೆ, ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ.
ಅರ್ಹತೆ ಮತ್ತು ಶೈಕ್ಷಣಿಕ ವಿವರಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾರ್ಗದರ್ಶಿ ಸೂತ್ರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: