ರಾಷ್ಟ್ರ ರಾಜಕೀಯ

ತಮಿಳುನಾಡಿನಲ್ಲಿ ವಿಜಯ್ ಯುಗ ಆರಂಭ: ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಪ್ರಮಾಣ ವಚನ ಸ್ವೀಕಾರ!

Thrishika Arun

ವರದಿಗಾರರು (Reporter)

Thrishika Arun

11:13 AM IST

ತಮಿಳುನಾಡಿನಲ್ಲಿ ವಿಜಯ್ ಯುಗ ಆರಂಭ: ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಪ್ರಮಾಣ ವಚನ ಸ್ವೀಕಾರ!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ, ಜನಪ್ರಿಯ ನಟ ಸಿ. ಜೋಸೆಫ್ ವಿಜಯ್ (C. Joseph Vijay) ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೇ 10ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ 1967ರ ನಂತರ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾದ ಪಕ್ಷವೊಂದರ ನಾಯಕ ರಾಜ್ಯದ ಅತ್ಯುನ್ನತ ಗದ್ದುಗೆ ಏರಿದಂತಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಹಲವು ಗಣ್ಯರು ಸಾಕ್ಷಿಯಾಗಿದ್ದರು.

ಮ್ಯಾಜಿಕ್ ನಂಬರ್ ತಲುಪಿದ ಟಿವಿಕೆ ಮೈತ್ರಿಕೂಟ

ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ ವಿಜಯ್ ನೇರಪ್ರತಿಷ್ಠೆಯ ಕಣವಾಗಿದ್ದ ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದರು. ಇವರ ಪಕ್ಷ ಟಿವಿಕೆ ಏಕಾಂಗಿಯಾಗಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಹುಮತಕ್ಕೆ (118 ಸ್ಥಾನ) ಸಲ್ಪ ಕೊರತೆ ಇದ್ದಿದ್ದರಿಂದ ಕಾಂಗ್ರೆಸ್ (5 ಸ್ಥಾನ), ಎಡಪಕ್ಷಗಳು, ವಿಸಿಕೆ (VCK) ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ಒಟ್ಟು 120 ಶಾಸಕರ ಬಲದೊಂದಿಗೆ ವಿಜಯ್ ಮೈತ್ರಿ ಸರ್ಕಾರ ರಚಿಸಿದರು. ಮೇ 13ರಂದು ನಡೆದ ಸದನದ ವಿಶ್ವಾಸಮತ ಯಾಚನೆಯಲ್ಲೂ ವಿಜಯ್ ಸರ್ಕಾರ ಜಯಭೇರಿ ಬಾರಿಸಿದೆ.

ಮುಖ್ಯಮಂತ್ರಿ ವಿಜಯ್ ಅವರ ಐತಿಹಾಸಿಕ ನಿರ್ಧಾರಗಳು:

ಅಧಿಕಾರ ವಹಿಸಿಕೊಂಡ ತಕ್ಷಣವೇ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿರುವ ಸಚಿವಾಲಯಕ್ಕೆ ತೆರಳಿದ ಸಿಎಂ ವಿಜಯ್, ಜನತೆಗೆ ನೀಡಿದ್ದ ಪ್ರಮುಖ ಭರವಸೆಗಳ ಮೂರು ಪ್ರಮುಖ ಕಡತಗಳಿಗೆ ಸಹಿ ಹಾಕುವ ಮೂಲಕ ಆಡಳಿತ ಆರಂಭಿಸಿದರು.

1.ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್:ಮೊದಲ ಸಹಿ.

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಮಿಳುನಾಡಿನ ಪ್ರತಿಯೊಂದು ಕುಟುಂಬಕ್ಕೂ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ ಅಧಿಕೃತ ಚಾಲನೆ ನೀಡಿದರು.

2.ಮಹಿಳಾ ಸುರಕ್ಷತೆಗೆ ವಿಶೇಷ ಸುವರ್ಣ ಘಟಕ:ಎರಡನೇ ಸಹಿ.

ರಾಜ್ಯಾದ್ಯಂತ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯನ್ನು ಬಲಪಡಿಸಲು ಮತ್ತು ತುರ್ತು ನೆರವು ನೀಡಲು ವಿಶೇಷ ಪೊಲೀಸ್ ವಿಭಾಗದ ಘಟಕವನ್ನು ಸ್ಥಾಪಿಸಲು ಆದೇಶಿಸಿದರು.

3.ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕಾನೂನು:ಮೂರನೇ ಸಹಿ.

ಯುವ ಪೀಳಿಗೆಯನ್ನು ಕಾಡುತ್ತಿರುವ ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಮತ್ತು ಡ್ರಗ್ಸ್ ಸಾಗಣೆಯನ್ನು ತಡೆಯಲು ವಿಶೇಷ ತನಿಖಾ ದಳ (Special Unit) ರಚನೆಗೆ ಸಹಿ ಹಾಕಿದರು.

ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ

ಮುಖ್ಯಮಂತ್ರಿ ವಿಜಯ್ ಅವರು ಗೃಹ, ಪೊಲೀಸ್, ನಗರಾಡಳಿತ ಮತ್ತು ಮಹಿಳಾ ಕಲ್ಯಾಣ ಸೇರಿದಂತೆ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಮೇ 21ರಂದು ನಡೆದ ಸಂಪುಟ ವಿಸ್ತರಣೆಯಲ್ಲಿ ಇನ್ನೂ 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಕಾಂಗ್ರೆಸ್‌ನ ಎಸ್. ರಾಜೇಶ್ ಕುಮಾರ್ ಅವರಿಗೆ ಪ್ರವಾಸೋದ್ಯಮ ಮತ್ತು ಪಿ. ವಿಶ್ವನಾಥನ್ ಅವರಿಗೆ ಉನ್ನತ ಶಿಕ್ಷಣ ಇಲಾಖೆ ನೀಡಲಾಗಿದೆ. ಟಿವಿಕೆ ನಾಯಕ ಎನ್. ಮೇರಿ ವಿಲ್ಸನ್ ಅವರಿಗೆ ಹಣಕಾಸು ಮತ್ತು ಯೋಜನಾ ಇಲಾಖೆ ನೀಡಲಾಗಿದ್ದು, ದೇಶದಲ್ಲೇ ಎರಡನೇ ಬಾರಿಗೆ ತಮಿಳುನಾಡಿನಲ್ಲಿ ಪ್ರತ್ಯೇಕ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಇಲಾಖೆಯನ್ನು ಸೃಷ್ಟಿಸಿ ಅದಕ್ಕೆ ಕುಮಾರ್ ಆರ್. ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ.

ಪಾರದರ್ಶಕ ಆಡಳಿತದ ಶಪಥ: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ಇದು ಕೇವಲ ಸಿನಿಮಾ ನಟನ ಯಶಸ್ಸಲ್ಲ, ಬದಲಿಗೆ ಬದಲಾವಣೆ ಬಯಸಿದ ತಮಿಳು ಜನತೆಯ ವಿಜಯ. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ, ಸಂಪೂರ್ಣ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನೀಡುವುದು ನಮ್ಮ ಸರ್ಕಾರದ ಪರಮ ಗುರಿ” ಎಂದು ಘೋಷಿಸಿದ್ದಾರೆ. ಸದ್ಯದಲ್ಲೇ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ.

Recent Articles:

ಬಂಗಾಳದಲ್ಲಿ ಹೊಸ ಯುಗ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ!

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ