ಬೆಂಗಳೂರಿನಲ್ಲಿ SIR: ಶೇ. 72 ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ; ಅಕ್ಟೋಬರ್ 7 ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ!
ವರದಿಗಾರರು (Reporter)
Hemanth Rajashekar01:07 AM IST

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಮುಂಬರುವ ದಿನಗಳಲ್ಲಿ ಅತ್ಯಂತ ಪ್ರಮುಖವಾದ ಪ್ರಕ್ರಿಯೆಯೊಂದರಲ್ಲಿ ಭಾಗಿಯಾಗಬೇಕಿದೆ. ಹೌದು, ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR – Special Intensive Revision) ಜಾರಿಗೆ ಬಂದಿದ್ದು, ಇದರ ಅನ್ವಯ ಜೂನ್ 30 ರಿಂದ ನಗರದಾದ್ಯಂತ ಬೃಹತ್ ಕಾರ್ಯಾಚರಣೆಯೊಂದು ಆರಂಭವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಪ್ರಕಟಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಂತೆ ನಡೆದುಕೊಳ್ಳಲು ನಾವು ಬದ್ಧರಾಗಿದ್ದೇವೆ. ಹೀಗಾಗಿ, ಜೂನ್ 30 ರಿಂದ ಬೆಂಗಳೂರಿನ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಈ ಬೃಹತ್ ಕಾರ್ಯಕ್ರಮವು ಸತತ ಒಂದು ತಿಂಗಳ ಕಾಲ ಸಾಗಲಿದ್ದು, ನಗರದ ಎಲ್ಲಾ ನಾಗರಿಕರು ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು ಎಂದು ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.
8,000ಕ್ಕೂ ಹೆಚ್ಚು ಬಿಎಲ್‌ಒಗಳ ನಿಯೋಜನೆ!
ಈ ಮಹತ್ವದ ಮನೆ ಮನೆ ಸಮೀಕ್ಷೆಗಾಗಿ ಬೆಂಗಳೂರಿನಾದ್ಯಂತ ಸುಮಾರು 8,000ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳನ್ನು (BLOs – Booth Level Officers) ನಿಯೋಜಿಸಲಾಗುತ್ತಿದೆ. ಪ್ರತಿಯೊಂದು ಮನೆಯ ವಿವರಗಳನ್ನು ಅತ್ಯಂತ ನಿಖರವಾಗಿ ಕಲೆಹಾಕಲು ಈ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಮುಖ್ಯ ಪ್ರಕ್ರಿಯೆ ಹೀಗಿರಲಿದೆ:
ನಿಯೋಜಿತ ಬಿಎಲ್‌ಒಗಳು ವೈಯಕ್ತಿಕವಾಗಿ ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಗದಿತ ನಮೂನೆಗಳನ್ನು (Forms) ವಿತರಿಸಲಿದ್ದಾರೆ. ನಿವಾಸಿಗಳು ಆ ಫಾರಂಗಳಲ್ಲಿ ಕೇಳಲಾದ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಸಹಿ ಹಾಕಿ ಮರಳಿ ನೀಡಬೇಕಾಗುತ್ತದೆ. ನಾಗರಿಕರು ನೇರವಾಗಿ ಈ ಫಾರಂಗಳನ್ನು ತುಂಬಿ ಇಟ್ಟುಕೊಂಡರೆ, ಅಧಿಕಾರಿಗಳು ಖುದ್ದಾಗಿ ಬಂದು ಇವುಗಳನ್ನು ಸಂಗ್ರಹಿಸಲಿದ್ದಾರೆ.
ಯಾವುದೇ ಒಂದು ಮನೆಯೂ ಈ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಬಿಎಲ್‌ಒಗಳು ನಿರಂತರವಾಗಿ ಫಾಲೋ-ಅಪ್ ಮಾಡಲಿದ್ದಾರೆ. ಬೆಂಗಳೂರಿನ ಸಾರ್ವಜನಿಕರು ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳೊಂದಿಗೆ ಮುಕ್ತವಾಗಿ ಸಹಕರಿಸಬೇಕಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಕೋರಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: