ಅಕ್ಟೋಬರ್ 28ರಂದು ನಡೆದ ಕೆಇಎ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಕಿಂಗ್‌ಪಿನ್ ಆರ್.ಡಿ ಪಾಟೀಲ್‌ನನ್ನು ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮವೆಸಗಿ ಸುದ್ದಿ ಬಯಲಾಗ್ತಿದ್ದಂತೆ ಎಸ್ಕೇಪ್ ಆಗಿದ್ದ ಆರ್.ಡಿ ಪಾಟೀಲ್ ಪೊಲೀಸರ ಕೈಗೆ ಸಿಗದೇ ಆಟವಾಡಿಸುತ್ತಿದ್ದ.. ಕಲಬುರಗಿ ನಗರದಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಇದ್ದುಕೊಂಡು ಪೊಲೀಸರಿಗೆ ತಲೆನೋವು ತಂದಿದ್ದ. ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಾಳಿ ನಡೆಸ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಂದಲೂ ಆರ್.ಡಿ ಪಾಟೀಲ್ ಎಸ್ಕೇಪ್ ಆಗಿದ್ದ. ಈ ವಿಚಾರ ಭಾರೀ ಸದ್ದಾಗ್ತಿದ್ದಂತೆ ಪೊಲೀಸರಿಗೂ ಒತ್ತಡ ಹೆಚ್ಚಾಗಿತ್ತು.
ಮಹಾರಾಷ್ಟ್ರದಲ್ಲಿ ಅವಿತಿದ್ದ ಕಿಂಗ್‌ಪಿನ್ R.D ಪಾಟೀಲ್ ಅರೆಸ್ಟ್
ವಿಶೇಷ ತಂಡ ರಚಿಸಿ ಮಹಾರಾಷ್ಟ್ರ, ಕಲಬುರಗಿ ಸುತ್ತಮುತ್ತ ಆರೋಪಿಗಾಗಿ ಹುಡುಕಾಟ ನಡೆಸಿದ್ರು. ದಿನಕ್ಕೊಂದು ನಂಬರ್‌ನಿಂದ ಪೊಲೀಸರಿಗೆ ಕರೆ ಮಾಡ್ತಿದ್ದ ಆರ್.ಡಿ ಪಾಟೀಲ್, ಪೊಲೀಸರನ್ನೇ ಆಟಾಡಿಸುತ್ತಿದ್ದ. ಪೊಲೀಸರ ತಲೆಗೆ ಹುಳ ಬಿಟ್ಟು ದಾರಿ ತಪ್ಪಿಸಿ ಮಹಾರಾಷ್ಟ್ರದಲ್ಲಿ ಅವಿತುಕೊಂಡಿದ್ದ ಕಿಗ್‌ಪಿನ್ ಆರ್.ಡಿ ಪಾಟೀಲ್‌ನನ್ನು ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 12 ದಿನಗಳಿಂದ ತಲೆಮರೆಸಿಕೊಂಡಿದ್ದ ಆರ್.ಡಿ.ಪಾಟೀಲ್‌ನ ಅರೆಸಟ್ ಮಾಡಿದ್ದು, ಕಲಬುರಗಿಗೆ ಕರೆತರುತ್ತಿದ್ದಾರೆ. ಪೊಲೀಸರ ಬಲೆಗೆ ಬಿದ್ದಿರುವ ಆರ್.ಡಿ ಪಾಟೀಲ್‌ನನ್ನು ಸಖತ್ತಾಗೇ ಡ್ರಿಲ್ ನಡೆಸಲಿದ್ದಾರೆ. ತೀವ್ರ ವಿಚಾರಣೆ ನಡೆಸಿ ಅಕ್ರಮದ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ.
