ರಚಿತಾ ರಾಮ್. ಸದ್ಯ ಸ್ಯಾಂಡಲ್‌ವುಡ್ನ ಟಾಪ್ ನಟಿ. ರಕ್ಷಿತಾ, ರಮ್ಯಾ, ರಾಧಿಕಾ ರೀತಿಯಲ್ಲೇ ಸ್ಯಾಂಡಲ್ ವುಡ್ ಕ್ವೀನ್ ಆಗಿ ರಚಿತಾ ರಾಮ್ ಮೆರೆಯುತ್ತಿದ್ದಾರೆ. ನಟ ದರ್ಶನ್ ಸಿನಿಮಾದಿಂದ ಹಿಡಿದು ಕಿಚ್ಚ ಸುದೀಪ್, ಶ್ರೀ ಮುರಳಿ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವು ಸ್ಟಾರ್ ನಟರ ಜತೆ ನಟಿಸಿ ಮಸ್ತ್ ಹವಾ ಕ್ರಿಯೇಟ್ ಮಾಡಿದ್ದಾರೆ.
ಹೌದು ಸದ್ಯ ಡಿಂಪಲ್ ಕ್ವೀನ್ ರಚಿತಾ ರಾಮ್, ಸ್ಯಾಂಡಲ್ವುಡ್ ಗೆ ಕ್ವೀನ್ ಇದ್ದಂತೆ. ಯಾಕಂದ್ರೆ ಸ್ಯಾಂಡಲ್ವುಡ್ನಲ್ಲಿ ರಚಿತಾ ರಾಮ್ ಗೆ ಬಹಳ ಬೇಡಿಕೆ ಇದೆ. ಅದೇ ಕಾರಣಕ್ಕೆ ಆಫರ್ ಮೇಲೆ ಆಫರ್ ಬರ್ತಿದೆ. ಸ್ಟಾರ್ ನಟರು ಇದೇ ಹೀರೋಯಿನ್ ಬೇಕು ಅಂತಾ ದುಂಬಾಲು ಬೀಳ್ತಿದ್ದಾರೆ ಅನ್ನೋ ಮಾತು ಚಂದನವನದಲ್ಲಿ ಕೇಳಿಬರ್ತಿದೆ. ಹೀಗೆ ಬಹುಬೇಡಿಕೆ ನಟಿಯಾಗಿ ರಚಿತಾರಾಮ್ ಬೆಳೆದಿದ್ದೇ ಒಂದು ರೋಚಕ ಕಥೆ.
ರಚಿತಾರಾಮ್ ಬಹುಬೇಡಿಕೆ ನಟಿಯಾಗಿದ್ದೇಗೆ?
ಹೌದು ವೀಕ್ಷಕರೆ, ರಚಿತಾ ರಾಮ್ ಮೊದಲು ಸೀರಿಯಲ್ ನಟಿ. ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿ ಬೆಳ್ಳಿ ತೆರೆಯಲ್ಲಿ ಕೂಡಾ ಸ್ಟಾರ್‌ಗಳಾಗಿ ಮಿಂಚಿದವರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಒಬ್ಬರು. ಬೆಂಕಿಯಲ್ಲಿ ಅರಳಿದ ಹೂ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ನಂತರ ಅವರು ಅರಸಿ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದರು.
ರಚಿತಾ ರಾಮ್ ಬದುಕು ಬದಲಿಸಿತು ಬುಲ್ ಬುಲ್
ನಿಜ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ರಚಿತಾ ರಾಮ್ಗೆ, 2013ರಲ್ಲಿ ಭಾಗ್ಯದ ಬಾಗಿಲು ತೆರೆಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ಆಫರ್ ಬಂತು. ಆ ಆಫರ್ ಕೇಳಿ ರಚಿತಾ ರಾಮ್ಗೆ ಇನ್ನಿಲ್ಲದಂತೆ ಸಂತೋಷ ಆಗಿತ್ತು. ಅದೇ ಖುಷಿಯಲ್ಲಿ ಬುಲ್ ಬುಲ್ ಸಿನಿಮಾದಲ್ಲಿ ನಟಿಸಲು ಬುಲ್ ಬುಲ್ ಒಪ್ಕೊಂಡೇ ಬಿಟ್ಟರು. ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಂಡು ಡಿಬಾಸ್ ಮತ್ತು ರಚಿತಾ ರಾಮ್ ಗೆ ದೊಡ್ಡ ಹೆಸರು ತಂದು ಕೊಟ್ಟಿತು. ಅಲ್ಲಿಂದ ರಚಿತಾ ರಾಮ್ ಬದುಕೇ ಬದಲಾಗಿ ಹೋಯಿತು.
ಬುಲ್ ಬುಲ್‌ಸಿನಿಮಾ ಸಕ್ಸಸ್ ನಂತರ ರಚಿತಾ ರಾಮ್ ಗೆ ಒಂದಾದ ಮೇಲೊಂದು ಆಫರ್ ಬರತೊಡಗಿದವು. ಕಿಚ್ಚ ಸುದೀಪ್ ಜತೆ ಅಭಿನಯಿಸಿದ ರನ್ನ ಸಿನಿಮಾ ಕೂಡ ದೊಡ್ಡ ಸಕ್ಸಸ್ ತಂದುಕೊಟ್ಟಿತು. ಬಳಿಕ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ನಟಿಸಿದರು. ಜಾನಿ ಜಾನಿ ಯಸ್ ಪಪ್ಪಾ ಚಿತ್ರದಲ್ಲಿ ದುನಿಯಾ ವಿಜಯ್ ಜತೆ ಮಿಂಚಿದರು. ಸೀತಾರಾಮ ಕಳ್ಯಾಣ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ ಬಣ್ಣ ಹಚ್ಚಿದರು. ಐ ಲವ್ ಯೂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ರೊಮ್ಯಾನ್ಸ್ ಮಾಡಿದರು. ಆಯುಷ್ಮಾನ್ ಭವ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಜತೆ ಅದ್ಭುತವಾಗಿ ನಟಿಸಿದರಿ. ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್, ರಥಾವರ ಚಿತ್ರದಲ್ಲಿ ಶ್ರೀಮುರಳಿ ಸೇರಿ ರಚಿತಾ ಅನೇಕ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ನಲ್ಲಿ ಮಿಂಚುತ್ತಿದ್ದು, ಅಭಿಮಾನಿಗಳ ಸಾಗರವನ್ನೇ ಸೃಷ್ಟಿಸಿಕೊಂಡಿದ್ದಾರೆ.
ಇದಿಷ್ಟೇ ಅಲ್ಲ ತೆಲುಗು ಇಂಡಸ್ಟ್ರಿಯಲ್ಲೂ ರಚಿತಾ ರಾಮ್ ಮೋಡಿ ಮಾಡಿದ್ದಾರೆ. ನಟ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜೊತೆ ಸೂಪರ್ ಮಚಿ ಚಿತ್ರದಲ್ಲಿ ಬಣ್ಣ ಹಚ್ಚಿ ಸದ್ದು ಮಾಡಿದ್ದಾರೆ. ಸದ್ಯ ರಚಿತಾ ರಾಮ್ ಮುಂದೆ ಸಾಲು ಸಾಲು ಸಿನಿಮಾಗಳಿವೆ. ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮಿ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದ್ರೆ, ಈವರೆಗೂ ರಾಕಿಂಗ್ ಸ್ಟಾರ್ ಯಶ್ ಜತೆ ನಟಿಸಲು ರಚಿತಾಗೆ ಅವಕಾಶ ಸಿಕ್ಕಿಲ್ಲ. ಆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
