ನಮ್ಮ ಬೆಂಗಳೂರು

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಮೇ 31ರ ಭಾನುವಾರ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ 2 ಗಂಟೆ ರೈಲು ಸಂಚಾರ ಸಂಪೂರ್ಣ ಬಂದ್!

Hemanth Rajashekar

ವರದಿಗಾರರು (Reporter)

Hemanth Rajashekar

01:44 AM IST

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಮೇ 31ರ ಭಾನುವಾರ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ 2 ಗಂಟೆ ರೈಲು ಸಂಚಾರ ಸಂಪೂರ್ಣ ಬಂದ್!

ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎಂದೇ ಕರೆಯಲ್ಪಡುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಪ್ರಮುಖ ಸೂಚನೆಯೊಂದನ್ನು ನೀಡಲಾಗಿದೆ. ನಮ್ಮ ಮೆಟ್ರೋದ ಅತ್ಯಂತ ಬ್ಯುಸಿ ಮಾರ್ಗಗಳಲ್ಲೊಂದಾದ ನೇರಳೆ ಮಾರ್ಗದ (Purple Line) ರೈಲು ಸಂಚಾರದಲ್ಲಿ ತಾತ್ಕಾಲಿಕವಾಗಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

ನೇರಳೆ ಮಾರ್ಗದಲ್ಲಿನ ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಮೆಟ್ರೋ ನಿಲ್ದಾಣಗಳ ನಡುವೆ ನಿಗದಿತ ಅವಧಿಗೆ ಮೆಟ್ರೋ ಸೇವೆಗಳು ಲಭ್ಯವಿರುವುದಿಲ್ಲ.

ವ್ಯತ್ಯಯದ ಸಮಯ ಮತ್ತು ಪ್ರಮುಖ ನಿಲ್ದಾಣಗಳು

  • ದಿನಾಂಕ: ಮೇ 31, ಭಾನುವಾರ
  • ಸಮಯ: ಮುಂಜಾನೆ 7:00 ಗಂಟೆಯಿಂದ ಬೆಳಗ್ಗೆ 9:00 ಗಂಟೆಯವರೆಗೆ (ಒಟ್ಟು 2 ಗಂಟೆಗಳು)
  • ಬಾಧಿತ ವಿಭಾಗ: ದೀಪಾಂಜಲಿನಗರ ಮೆಟ್ರೋ ನಿಲ್ದಾಣದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಮೆಟ್ರೋ ನಿಲ್ದಾಣಗಳ ನಡುವಿನ ಭಾಗ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಇತಿಹಾಸ ಪುಟ ಸೇರಿದ ಪೂಜಾ ಸಿಂಗ್: 14 ವರ್ಷಗಳ ಹಳೆಯ ಹೈಜಂಪ್ ರಾಷ್ಟ್ರೀಯ ದಾಖಲೆ ಧೂಳೀಪಟ!

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ