ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗದ ವಿಸ್ತೃತ ಮಾರ್ಗಗಳಿಗೆ ಪ್ರಧಾನಿ ಮೋದಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಚಲ್ಲಘಟ್ಟದಿಂದ ಕೆಂಗೇರಿ, K.R.ಪುರಂನಿಂದ ಬೈಯಪ್ಪನಹಳ್ಳಿ ಮಾರ್ಗವನ್ನು ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ದೆಹಲಿ-ಮೀರತ್ RRTS ರೈಲು ಲೋಕಾರ್ಪಣೆಯಲ್ಲಿ ನಮೋ ಭಾಗಿಯಾಗಿ, ಬೆಂಗಳೂರು ಮೆಟ್ರೋ ರೈಲುಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಇನ್ನು ಬೈಯಪ್ಪನಹಳ್ಳಿ-ಕೆ.ಆರ್.ಪುರ ಮತ್ತು ಚಲ್ಲಘಟ್ಟ-ಕೆಂಗೇರಿ ನೇರಳೆ ಮಾರ್ಗದಲ್ಲಿ ಅಕ್ಟೋಬರ್ 9ರಂದು ರೈಲು ಸಂಚಾರ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಇವತ್ತು ಪ್ರಧಾನಿ ಮೋದಿ ಅಧಿಕೃತವಾಗಿ ಎರಡೂ ಮಾರ್ಗಗಳಿಗೆ ಚಾಲನೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ರು.
ಮೈಸೂರಿನಲ್ಲೂ ಮೆಟ್ರೋ ಸೇವೆ : ಮೋದಿ ಹೇಳಿದ್ದೇನು?
ಸಾಂಸ್ಕೃತಿಕ ನಗರಿ ಮೈಸೂರು ಜನರು ದಸರಾ ಸಂಭ್ರಮದಲ್ಲಿರುವಾಗ್ಲೇ ಪ್ರಧಾನಿ ಮೋದಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನಂತೆ ಮೈಸೂರಿನಲ್ಲೂ ಮೆಟ್ರೋ ಸೇವೆ ವಿಸ್ತರಿಸುವುದಾಗಿ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಚಾಲನೆ ನೀಡಿರುವ ಪ್ರಧಾನಿ ಮೋದಿ ಮೈಸೂರಿಗೆ ಮೆಟ್ರೋ ಭಾಗ್ಯ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಮೆಟ್ರೋ ಆಗಲಿದೆ ಅಂತಾ ಮೋದಿ ಹೇಳಿದ್ದು, ಟ್ರಾಫಿಕ್‌ನಿಂದ ಬೇಸತ್ತ ಜನರಿಗೆ ರಿಲೀಫ್ ಸಿಕ್ಕಂತಾಗಿದೆ.
