‘ಇನ್ಮುಂದೆ ಬ್ಲ್ಯಾಕ್‌ಮೇಲ್‌ಗೆ ಜಗ್ಗಲ್ಲ ಮೋದಿ ಸರ್ಕಾರ’: ಕಠಿಣ ಕ್ರಮಕ್ಕೆ ಸಿದ್ಧತೆ, ಗುಪ್ತಚರ ವರದಿಯ ಸಂಚಲನಕಾರಿ ಮಾಹಿತಿ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಪಿಯೂಷ್ ಪದ್ಮಾಕರ್!
ವರದಿಗಾರರು (Reporter)
Hemanth Rajashekar07:20 AM IST

ಕೇಂದ್ರ ರಾಜಕೀಯ ಅಂಗಳದಲ್ಲಿ ಇದೀಗ ದೊಡ್ಡ ಮಟ್ಟದ ಬಿರುಗಾಳಿ ಎದ್ದಿದೆ. ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ಇಂಡಿಯಾ ಟಿವಿಯ ಹಿರಿಯ ಪತ್ರಕರ್ತ ಹಾಗೂ ಮ್ಯಾನೇಜಿಂಗ್ ಎಡಿಟರ್ ಪಿಯೂಷ್ ಪದ್ಮಾಕರ್ ನೀಡಿರುವ ಹೇಳಿಕೆಯೊಂದು ರಾಜಕೀಯ ರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶವಿರೋಧಿ ಹಾಗೂ ಹಿತಾಸಕ್ತಿ ಕಾಯುವ ಕೀಟಸಮಾನ ಶಕ್ತಿಗಳ ಯಾವುದೇ ಬೆದರಿಕೆ ಅಥವಾ ‘ಬ್ಲ್ಯಾಕ್‌ಮೇಲ್’ ತಂತ್ರಗಳಿಗೆ ಇನ್ಮುಂದೆ ಮಣಿಯದಿರಲು ಸ್ಪಷ್ಟ ಹಾಗೂ ದೃಢ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಅಗ್ರ ನಾಯಕರಿಗೆ ತಲುಪಿದೆ ಪೂರ್ಣ ಪ್ರಮಾಣದ ಗುಪ್ತಚರ ವರದಿ
ಪಿಯೂಷ್ ಪದ್ಮಾಕರ್ ನೀಡಿರುವ ಮಾಹಿತಿಯ ಪ್ರಕಾರ, ದೇಶದ ಭದ್ರತೆ, ರಾಜಕೀಯ ಸ್ಥಿರತೆ ಮತ್ತು ಆಂತರಿಕ ಸವಾಲುಗಳಿಗೆ ಸಂಬಂಧಿಸಿದಂತೆ ಅತ್ಯಂತ ಗೌಪ್ಯ ಹಾಗೂ ಸಮಗ್ರವಾದ ಗುಪ್ತಚರ ವರದಿಯು ಕೇಂದ್ರ ಸರ್ಕಾರದ ಅಗ್ರ ಇಬ್ಬರು ನಾಯಕರಿಗೆ (ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ) ಸಲ್ಲಿಕೆಯಾಗಿದೆ. ದೇಶದ ಒಳಗೆ ಮತ್ತು ಹೊರಗೆ ಕುಳಿತು ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಹಾಗೂ ಹಾದಿ ತಪ್ಪಿಸಲು ಯತ್ನಿಸುತ್ತಿರುವ ಶಕ್ತಿಗಳ ಸಂಪೂರ್ಣ ಜಾಲವನ್ನು ಈ ವರದಿಯಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.
‘ಬ್ಲ್ಯಾಕ್‌ಮೇಲ್‌ಗೆ ಜಾಗವಿಲ್ಲ’: ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ?
“ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುವ ಅಥವಾ ಒತ್ತಡ ಹೇರುವ ದಿನಗಳು ಮುಗಿದುಹೋಗಿವೆ” ಎಂದು ಸ್ಪಷ್ಟಪಡಿಸಿರುವ ಪದ್ಮಾಕರ್, ಇಂತಹ ಶಕ್ತಿಗಳನ್ನು ನಿಯಂತ್ರಿಸಲು ಸರ್ಕಾರ ಸನ್ನದ್ಧವಾಗಿದೆ ಎಂದಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇಲೆ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದ್ದು, ಅತ್ಯಂತ ಕಠಿಣವಾದ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳಿಗೆ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ.
ರಾಜಕೀಯ ವಲಯದಲ್ಲಿ ಸಂಚಲನ
ಈ ವಿದ್ಯಮಾನವು ದೆಹಲಿ ರಾಜಕೀಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಸರ್ಕಾರದ ಮುಂದಿನ ನಡೆ ಏನಿರಬಹುದು? ಯಾವ ರಂಗಗಳಲ್ಲಿ ಅಥವಾ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ದೇಶದ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಯತ್ನವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ಈ ಮೂಲಕ ನೀಡಲು ಹೊರಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: