ಜಾಗತಿಕ ಪ್ರವಾಸಿಗರನ್ನು ಸೆಳೆಯಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ರೆಡಿ: ಮಯೂರ ಹೋಟೆಲ್, ಜಂಗಲ್ ಲಾಡ್ಜ್‌ಗಳಿಗೆ ಹೈಟೆಕ್ ಮೆರಗು.
ವರದಿಗಾರರು (Reporter)
Hemanth Rajashekar05:25 AM IST

ಬೆಂಗಳೂರು: ಕರ್ನಾಟಕದ ಪ್ರಕೃತಿ ಸೌಂದರ್ಯ, ಐತಿಹಾಸಿಕ ತಾಣಗಳು ಹಾಗೂ ಪಾರಂಪರಿಕ ವೈಭವವನ್ನು ಜಗತ್ತಿಗೆ ಪರಿಚಯಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈಗ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕೆಎಸ್‌ಟಿಡಿಸಿ (KSTDC) ನಿರ್ವಹಣೆಯ ‘ಮಯೂರ’ ಹೋಟೆಲ್‌ಗಳು, ಜಂಗಲ್ ಲಾಡ್ಜ್‌ಗಳು ಹಾಗೂ ಸರ್ಕಾರಿ ಆತಿಥ್ಯ ಕೇಂದ್ರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡುವ ಉದ್ದೇಶದಿಂದ ಸ್ವಚ್ಛತೆ, ಸುರಕ್ಷತೆ, ಆಧುನಿಕ ಮೂಲಸೌಕರ್ಯ ಹಾಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆತಿಥ್ಯ ನೀಡುವುದು ಈ ಹೊಸ ಯೋಜನೆಯ ಪ್ರಮುಖ ಗುರಿಯಾಗಿದೆ.
ಯೋಜನೆಯ ಪ್ರಮುಖ ಮುಖ್ಯಾಂಶಗಳು
- ಅಂತರರಾಷ್ಟ್ರೀಯ ಮಟ್ಟದ ಆತಿಥ್ಯ: ಮಯೂರ ಹೋಟೆಲ್‌ಗಳಲ್ಲಿ ಡಿಜಿಟಲ್ ಬುಕಿಂಗ್, ಹೈ-ಸ್ಪೀಡ್ ವೈಫೈ, ಆಧುನಿಕ ಕೊಠಡಿಗಳು ಹಾಗೂ ಸ್ಥಳೀಯ ಪಾರಂಪರಿಕ ಖಾದ್ಯಗಳನ್ನೊಳಗೊಂಡ ಗುಣಮಟ್ಟದ ರೆಸ್ಟೋರೆಂಟ್ ವ್ಯವಸ್ಥೆ.
- ಹೈಟೆಕ್ ಮೂಲಸೌಕರ್ಯ: ಪರಿಸರಸ್ನೇಹಿ ತಂತ್ರಜ್ಞಾನ, ಡಿಜಿಟಲ್ ಪೇಮೆಂಟ್, ಆನ್‌ಲೈನ್ ಗೈಡ್ ಸೌಲಭ್ಯ ಹಾಗೂ ಸುಸಜ್ಜಿತ ರಿಸೆಪ್ಷನ್ ಕೇಂದ್ರಗಳು.
- ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಆದ್ಯತೆ: ಎಲ್ಲಾ ಪ್ರವಾಸಿ ಆತಿಥ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ತರಬೇತಿ ಪಡೆದ ನೌಕರರ ನೇಮಕ.
- ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (JLR) ಮೇಲ್ದರ್ಜೆ: ವನ್ಯಜೀವಿ ಪ್ರಿಯರನ್ನು ಆಕರ್ಷಿಸಲು ಜಂಗಲ್ ಲಾಡ್ಜ್‌ಗಳಲ್ಲಿ ಸಫಾರಿ ಅನುಭವ ಹಾಗೂ ತಂಗುವ ವ್ಯವಸ್ಥೆಗೆ ಹೊಸ ಮೆರಗು.
ಮಯೂರ ಹೋಟೆಲ್ ಹಾಗೂ ರೆಸಾರ್ಟ್‌ಗಳು:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಅಡಿಯಲ್ಲಿ ಪ್ರಸ್ತುತ 24ಕ್ಕೂ ಹೆಚ್ಚು ಮಯೂರ ಹೋಟೆಲ್ ಹಾಗೂ ರೆಸಾರ್ಟ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಅತ್ಯಂತ ಪ್ರಸಿದ್ಧ ಐತಿಹಾಸಿಕ, ಧಾರ್ಮಿಕ ಹಾಗೂ ನೈಸರ್ಗಿಕ ಪ್ರವಾಸಿ ತಾಣಗಳಲ್ಲಿ ಇವು ಹರಡಿಕೊಂಡಿವೆ.
ಪ್ರಮುಖ ಮಯೂರ ಹೋಟೆಲ್‌ಗಳ ಪಟ್ಟಿ:
- ಪಾರಂಪರಿಕ ಹಾಗೂ ಪ್ರಸಿದ್ಧ ತಾಣಗಳು:
- ಮಯೂರ ಭುವನೇಶ್ವರಿ (ಹಂಪಿ – UNESCO ವಿಶ್ವ ಪಾರಂಪರಿಕ ತಾಣದ ಆವರಣದಲ್ಲಿರುವ ಏಕೈಕ ಹೋಟೆಲ್)
- ಮಯೂರ ಹೊಯ್ಸಳ (ಮೈಸೂರು)
- ಮಯೂರ ಚಾಲುಕ್ಯ (ಬಾದಾಮಿ)
- ಮಯೂರ ವೇಲಾಪುರಿ (ಬೇಲೂರು)
- ಮಯೂರ ಶಾಂತಲಾ (ಹಳೇಬೀಡು)
- ಮಯೂರ ದುರ್ಗ್ (ಚಿತ್ರದುರ್ಗ)
- ಹಿಲ್ ಸ್ಟೇಷನ್ ಹಾಗೂ ನೈಸರ್ಗಿಕ ತಾಣಗಳು:
- ಮಯೂರ ಪೈನ್ ಟಾಪ್ (ನಂದಿ ಬೆಟ್ಟ)
- ಮಯೂರ ವ್ಯಾಲಿ ವ್ಯೂ (ಮಡಿಕೇರಿ, ಕೊಡಗು)
- ಮಯೂರ ಬಿಲಿಗಿರಿ (ಬಿ.ಆರ್. ಹಿಲ್ಸ್)
- ಜಲಪಾತ ಹಾಗೂ ನದಿ ತೀರದ ಆಸ್ತಿಗಳು:
- ಮಯೂರ ಗೆರುಸೊಪ್ಪ (ಜೋಗ್‌ಫಾಲ್ಸ್)
- ಮಯೂರ ರೀವರ್‌ವ್ಯೂ (ಶ್ರೀರಂಗಪಟ್ಟಣ)
- ಮಯೂರ ಕಾವೇರಿ (ಕೆಆರ್‌ಎಸ್ – ಬೃಂದಾವನ್ ಗಾರ್ಡನ್)
- ಮಯೂರ ಕೃಷ್ಣ (ಆಲಮಟ್ಟಿ ಆಣೆಕಟ್ಟು)
- ಮಯೂರ ಭಾರಚುಕ್ಕಿ (ಶಿವನಸಮುದ್ರ)
ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ
ಸರ್ಕಾರದ ಈ ನಿರ್ಧಾರದಿಂದಾಗಿ ಸ್ಥಳೀಯ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಗುರುತು ಸಿಗಲಿದೆ. ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಸೇವೆ ಸಿಗುವುದರಿಂದ ದೇಸೀ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಕರ್ನಾಟಕದಲ್ಲಿ ಕೆಪಿಎಸ್‌ಸಿ ಬ್ರಷ್ಟಾಚಾರ – 80 ಲಕ್ಷಕ್ಕೆ ‘ಪಶು ವೈದ್ಯಾಧಿಕಾರಿ’ ಹುದ್ದೆ ಸೇಲ್?