ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ಚತುರ. ಕನಕಪುರ ಬಂಡೆ ಅಂತಲೇ ಕರೆಸಿಕೊಳ್ಳುವ ಡಿಕೆಶಿ, ಆಕ್ರಮಣಕಾರಿ ನಾಯಕ. ರಾಜಕೀಯ ಲೆಕ್ಕಾಚಾರದಲ್ಲಿ ಇಟ್ಟ ಗುರಿ ತಪ್ಪದೇ ಸಾಧಿಸುವ ಛಲಗಾರ. ರಾಜಕೀಯ ತಂತ್ರಗಳಿAದಲೇ ಸದ್ದು ಮಾಡುವ ಡಿಕೆಶಿ ಮುಂದಿನ ರೇಸ್ನಲ್ಲೂ ಇದ್ದಾರೆ. ಇದ್ರ ಮಧ್ಯೆಯೇ ಈಗ ಇಡೀ ದೇಶಾದ್ಯಂತ ಡಿಕೆಶಿ ಹೆಸರು ಮಾಡುತ್ತಿದೆ. ಅದು ರಾಜಕೀಯ ತಂತ್ರ ಅಲ್ಲ, ಬದಲಾಗಿ ಅತಿಶ್ರೀಮಂತರ ವಿಚಾರಕ್ಕೆ..
ಇಡೀ ದೇಶಾದ್ಯಂತ ಡಿಕೆಶಿ ಹೆಸರು ಸದ್ದು ಮಾಡ್ತಿದೆ. ಭಾರತದಲ್ಲಿರುವ ಎಲ್ಲಾ ಶ್ರೀಮಂತ ಶಾಸಕರನ್ನು ಹಿಂದಿಕ್ಕಿ ಡಿಕೆಶಿ ನಂಬರ್ ಒನ್ ಆಗಿದ್ದಾರೆ. ಅಂದ್ರೆ ಭಾರತದಲ್ಲಿರುವ ಶಾಸಕರೆಲ್ಲರ ಪೈಕಿ ಡಿಕೆಶಿ ನಂಬರ್ ಒನ್ ಶ್ರೀಮಂತ. ದೇಶದ 4001 ಶಾಸಕರ ಪೈಕಿ ಕನಕಪುರದ ರಣಬೇಟೆಗಾರನೇ ಅತಿಹೆಚ್ಚು ಸಿರಿವಂತ. ಹಾಗಾದ್ರೆ, ಡಿಕೆಶಿ ಒಟ್ಟು ಆಸ್ತಿ ಎಷ್ಟು? ಅನ್ನೋದು ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ.
ಡಿಕೆಶಿ ಶ್ರೀಮಂತ ಶಾಸಕರಾದ್ರೆ, ಅತಿ ಕಡಿಮೆ ಆಸ್ತಿ ಹೊಂದಿದ ಎಂಎಲ್ಎ ಯಾರು..?
ಹೌದು.. ಎಡಿಆರ್ ಅಂದ್ರೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ಸಂಸ್ಥೆ ಸರ್ವೆ ಮಾಡಿದೆ. ಇದೊಂದು ವಕೀಲರ ಗುಂಪಾಗಿದ್ದು, ದೇಶದ ಅತಿ ಶ್ರೀಮಂತ ಶಾಸಕರು ಹಾಗೂ ಅತಿ ಕಡಿಮೆ ಆಸ್ತಿ ಹೊಂದಿರುವ ಎಂಎಲ್ಎಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಶ್ರೀಮಂತ ಶಾಸಕರ ಪೈಕಿ ಡಿಕೆಶಿ ಮೊದಲ ಸ್ಥಾನದಲ್ಲಿದ್ದರೆ, ಅತಿ ಕಡಿಮೆ ಆಸ್ತಿ ಹೊಂದಿದ ಎಂಎಲ್ಎಗಳ ಪೈಕಿ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ನಿರ್ಮಲ್ಕುಮಾರ್ ಧಾರಾ ಅತಿ ಕಡಿಮೆ ಅಂದ್ರೆ 1700 ರೂಪಾಯಿ ಆಸ್ತಿ ಹೊಂದಿರೋದು ಗೊತ್ತಾಗಿದೆ.

ಕನಕಪುರ ಕ್ಷೇತ್ರ ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, 1413 ಕೋಟಿ ರೂಪಾಯಿ ಆಸ್ತಿ ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಗೌರಿಬಿದನೂರು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ ಇದ್ದು, ಒಟ್ಟು 1267 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲೂ ಕರ್ನಾಟಕದ ಶಾಸಕರೇ ಇದ್ದು, ಗೋವಿಂದರಾಜನಗರ ಕ್ಷೇತ್ರ ಪ್ರತಿನಿಧಿಸುವ ಪ್ರಿಯಾಕೃಷ್ಣ, 1156 ಕೋಟಿ ರೂಪಾಯಿ ಹೊಂದಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಆಂಧ್ರಪ್ರದೇಶದ ಕುಪ್ಪಂ ಕ್ಷೇತ್ರದ ಟಿಡಿಪಿ ಶಾಸಕ ಚಂದ್ರಬಾಬು ನಾಯ್ಡು ಇದ್ದು, 668 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಮತ್ತೊಂದ್ಕಡೆ, ಗುಜರಾತ್ನ ಮಾನ್ಸಾ ಕ್ಷೇತ್ರದ ಬಿಜೆಪಿ ಶಾಸಕ ಜಯಂತಿಭಾಯ್ ಸೋಮಾಭಾಯ್ ಪಟೇಲ್, 661 ಕೋಟಿ ರೂಪಾಯಿ ಆಸ್ತಿ ಹೊಂದುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ. ಇನ್ನು, ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ 6ನೇ ಸ್ಥಾನದಲ್ಲಿದ್ದು, 648 ಕೋಟಿ ರೂಪಾಯಿ ಸಂಪತ್ತು ಘೋಷಿಸಿಕೊಂಡಿದ್ದಾರೆ. ಏಳನೇ ಸ್ಥಾನದಲ್ಲಿ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಇದ್ದು, ಇವರು 510 ಕೋಟಿ ರೂಪಾಯಿ ಹೊಂದಿದ್ದಾರೆ. ಮತ್ತೊಂದ್ಕಡೆ, ಮಹಾರಾಷ್ಟçದ ಘಾಟ್ಕೋಪರ್ ಈಸ್ಟ್ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ 500 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ಈ ಮೂಲಕ 8ನೇ ಸ್ಥಾನ ಅಲಂಕರಿಸಿದ್ದಾರೆ. ಮತ್ತೊಂದ್ಕಡೆ, ಛತ್ತೀಸ್ಗಢದ ಅಂಬಿಕಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಎಸ್.ಬಾಬಾ 500 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಳ್ಳುವ ಮೂಲಕ 9ನೇ ಸ್ಥಾನದಲ್ಲಿದ್ದಾರೆ. ಇನ್ನು, 10ನೇ ಸ್ಥಾನದಲ್ಲಿ ಮಹಾರಾಷ್ಟçದ ಮಲಬಾರ್ ಹಿಲ್ ಕ್ಷೇತ್ರದ ಬಿಜೆಪಿ ಎಂಎಲ್ಎ ಮಂಗಲಪ್ರಭಾತ್ ಲೋಧಾ 441 ಕೋಟಿ ರೂಪಾಯಿಯಷ್ಟು ಸಂಪತ್ತು ಹೊಂದಿದ್ದಾರೆ ಎಂದು ಎಡಿಆರ್ ವರದಿ ಮಾಡಿದೆ.)) ಇದು ಅತಿ ಶ್ರೀಮಂತ ಶಾಸಕರ ಪಟ್ಟಿಯಾದ್ರೆ, ಇನ್ನೂ ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕರು ಯಾರು ಅನ್ನೋದನ್ನೂ ನೋಡಿ.

ಅತಿ ಕಡಿಮೆ ಆಸ್ತಿ ಹೊಂದಿದ ಎಂಎಲ್ಎಗಳ ಪೈಕಿ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ನಿರ್ಮಲ್ಕುಮಾರ್ ಧಾರಾ ಅತಿ ಕಡಿಮೆ ಅಂದ್ರೆ 1700 ರೂಪಾಯಿ ಆಸ್ತಿ ಹೊಂದಿದ್ದಾರೆ. ಇನ್ನು ಒಡಿಶಾದ ರಾಯಗಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಕರಂದ ಮುದುಲಿ, 15 ಸಾವಿರ ಆಸ್ತಿ ಘೋಷಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಂದ್ಕಡೆ, ಮೂರನೇ ಸ್ಥಾನದಲ್ಲಿ ಪಂಜಾಬ್ನ ಫಜಿಲ್ಕಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಶಾಸಕ ನರಿಂದರ್ ಪಾಲ್ ಸಿಂಗ್ ಸಾವ್ನಾ 18,370 ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಮತ್ತೊಂದ್ಕಡೆ, ಪಂಜಾಬ್ನ ಸಂಗ್ರೂರ್ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಶಾಸಕ ನರೀಂದರ್ ಕೌರ್ 24,409 ರೂಪಾತಿ ಆಸ್ತಿ ಘೋಷಿಸಿಕೊಳ್ಳುವ ಮೂಲಕ 4ನೇ ಸ್ಥಾನದಲ್ಲಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ಜಾರ್ಖಂಡ್ನ ಜುಗ್ಸಲೈ ಜೆಎಂಎಂ ಎಂಎಲ್ಎ ಮಂಗಲ್ ಕಾಳಿಂದಿ 30,000 ರೂಪಾಯಿ ಆಸ್ತಿ ಹೊಂದಿದ್ದಾರೆ. ಇನ್ನು, ಪಶ್ಚಿಮ ಬಂಗಾಳದ ನಬದ್ವಿಪ್ ಕ್ಷೇತ್ರದ ಎಐಟಿಸಿ ಶಾಸಕ ಪುಂಡರೀಕಕ್ಷಯ ಸಹಾ 30,423 ರೂಪಾಯಿ ಆಸ್ತಿ ಹೊಂದಿದ್ದು, ಈ ಮೂಲಕ 6ನೇ ಸ್ಥಾನದಲ್ಲಿದ್ದಾರೆ. ಮತ್ತೊಂದ್ಕಡೆ, 7ನೇ ಸ್ಥಾನದಲ್ಲಿ ಛತ್ತೀಸ್ಗಡದ ಚಂದ್ರಾಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮ್ ಕುಮಾರ್ ಯಾದವ್ ಇದ್ದು, ಒಟ್ಟು 30,496 ರೂಪಾಯಿ ಆಸ್ತಿ ಹೊಂದಿದ್ದಾರೆ. ಇನ್ನು, ಉತ್ತರ ಪ್ರದೇಶದ ಚತ್ರಕೂಟ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಕುಮಾರ್ ಅನಿಲ್ ಪ್ರಧಾನ್ 30,496 ಹೊಂದಿದ್ದು, 8 ನೇ ಸ್ಥಾನದಲ್ಲಿದ್ದಾರೆ. ಮಧ್ಯಪ್ರದೇಶದ ಪಂಧನಾ ಕ್ಷೇತ್ರದ ಬಿಜೆಪಿ ಎಂಎಲ್ಎ ರಾಮ್ ಡಂಗೋರ್, 50,749 ರೂಪಾಯಿ ಹೊಂದುವ ಮೂಲಕ 9ನೇ ಸ್ಥಾನದಲ್ಲಿದ್ರೆ, ಮಹಾರಾಷ್ಟçದ ದಹಾನು ಕ್ಷೇತ್ರದ ಸಿಪಿಐಎಂ ಎಂಎಲ್ಎ, ವಿನೋ ಭಿವಾ ನಿಕೋಲ್ 51 ಸಾವಿರದ 82 ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡು 10ನೇ ಸ್ಥಾನದಲ್ಲಿದ್ದಾರೆ. ಆಯಾ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಇವರೆಲ್ಲರೂ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ.
ಒಟ್ನಲ್ಲಿ, ಅತಿ ಶ್ರೀಮಂತ ಶಾಸಕರ ಪೈಕಿ ಕರ್ನಾಟಕದ ಮೂವರು ಶಾಸಕರು ಮೊದಲ ಸ್ಥಾನದಲ್ಲಿದ್ದು, ಅದ್ರಲ್ಲಿ ಡಿಸಿಎಂ ಡಿಕೆಶಿಯೇ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಡಿಸಿಎಂ ಡಿಕೆಶಿ ಈಗ ದೇಶದಲ್ಲೇ ಚರ್ಚೆಯ ಕೇಂದ್ರಬಿ0ದುವಾಗಿರೋದ0ತೂ ಸತ್ಯ.
