ಕ್ರೈಂ

ಹಳಿಯಾಳದಲ್ಲಿ ರೌಡಿ ಅಟ್ಟಹಾಸ: ಪೊಲೀಸರ ಮೇಲೆಯೇ ಹಲ್ಲೆಯಾದರೂ ಸುಮ್ಮನಿದ್ದ ಎಸ್‌ಐ ಬಸವರಾಜ ಅಮಾನತು.

Hemanth Rajashekar

ವರದಿಗಾರರು (Reporter)

Hemanth Rajashekar

01:08 AM IST

ಹಳಿಯಾಳದಲ್ಲಿ ರೌಡಿ ಅಟ್ಟಹಾಸ: ಪೊಲೀಸರ ಮೇಲೆಯೇ ಹಲ್ಲೆಯಾದರೂ ಸುಮ್ಮನಿದ್ದ ಎಸ್‌ಐ ಬಸವರಾಜ ಅಮಾನತು.

ಹಳಿಯಾಳ: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೇ ರೌಡಿ ಶೀಟರ್ ಒಬ್ಬನ ಮುಂದೆ ಅಸಹಾಯಕರಾಗಿ ಕೈಕಟ್ಟಿ ನಿಂತರೆ ಏನಾಗಬಹುದು? ಇಂತಹದ್ದೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದ್ದು, ಕರ್ತವ್ಯ ಲೋಪ ಎಸಗಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಬಸವರಾಜ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಎಂ.ಎನ್. ಕಡಕ್ ಆ್ಯಕ್ಷನ್.

ರೌಡಿಯ ಆರ್ಭಟಕ್ಕೆ ಹೆದರಿ ನಿಂತ ಖಾಕಿ ಅಧಿಕಾರಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಘಟನೆಯ ಹಿನ್ನೆಲೆ: ರೌಡಿ ‘ಮಚ್ ಮಂಜಾ’ ಅಟ್ಟಹಾಸ!

ಕೆಲ ದಿನಗಳ ಹಿಂದೆ ಹಳಿಯಾಳದ ಮೌರ್ಯ ಹೋಟೆಲ್ ಬಳಿ ಭೀಕರ ಘಟನೆಯೊಂದು ನಡೆದಿತ್ತು. ಸ್ಥಳೀಯ ರೌಡಿ ಶೀಟರ್ ‘ಮಚ್ ಮಂಜಾ’ ಅಲಿಯಾಸ್ ಮಂಜುನಾಥ ಎಂಬಾತ ಸಾರ್ವಜನಿಕ ರಸ್ತೆಯಲ್ಲೇ ಪೊಲೀಸರ ಜೀಪ್ ತಡೆದು ಭೀಕರ ರಂಪಾಟ ನಡೆಸಿದ್ದ. ಅಷ್ಟಕ್ಕೇ ನಿಲ್ಲದ ಈತ, ಜೀಪ್‌ನಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಮುಗಿಬಿದ್ದು ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಟ್ಟಹಾಸ ಮೆರೆದಿದ್ದ.

ಕೈಕಟ್ಟಿ ತಮಾಷೆ ನೋಡಿದ ಎಸ್‌ಐ ಬಸವರಾಜ!

ರೌಡಿ ಶೀಟರ್ ಪೊಲೀಸರ ಮೇಲೆಯೇ ಹಲ್ಲೆ ಮಾಡುತ್ತಿದ್ದರೂ, ಸ್ಥಳದಲ್ಲಿದ್ದ ಹಳಿಯಾಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಅವರು ಆತನನ್ನು ನಿಯಂತ್ರಿಸುವ ಅಥವಾ ಬಂಧಿಸುವ ಯಾವುದೇ ಸಾಹಸಕ್ಕೆ ಕೈಹಾಕಲಿಲ್ಲ. ಒಬ್ಬ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ರೌಡಿಯ ಆರ್ಭಟವನ್ನು ತಡೆಯುವ ಬದಲು, ಸುಮ್ಮನೆ ಅಸಹಾಯಕರಾಗಿ ಕೈಕಟ್ಟಿ ನಿಂತಿದ್ದರು.

ಕಣ್ಣೆದುರೇ ಕಾನೂನು ಕೈಗೆತ್ತಿಕೊಂಡು ಪೊಲೀಸರ ಮೇಲೆಯೇ ದರ್ಪ ಮೆರೆಯುತ್ತಿದ್ದ ರೌಡಿಯ ವರ್ತನೆ ಮತ್ತು ಅದಕ್ಕೆ ಹೆದರಿ ನಿಂತ ಎಸ್‌ಐ ನಡೆ, ಸ್ಥಳೀಯ ಸಾರ್ವಜನಿಕರನ್ನು ಕೆರಳಿಸಿತ್ತು. “ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ರೌಡಿಗಳ ಮುಂದೆ ಹೀಗೆ ಶರಣಾದರೆ ಸಾಮಾನ್ಯರ ಕಥೆ ಏನು?” ಎಂಬ ಪ್ರಶ್ನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಎಸ್‌ಪಿ ದೀಪನ್ ಎಂ.ಎನ್. ಅವರಿಂದ ಕಡಕ್ ಆದೇಶ

ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಎಂ.ಎನ್. ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಇಲಾಖೆಯ ಘನತೆಗೆ ಧಕ್ಕೆ ತಂದ ಹಾಗೂ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಎಸ್‌ಐ ಬಸವರಾಜ ಅವರನ್ನು ಸೇವೆಯಿಂದ ಅಮಾನತುಗೊಳಿಸಿ (SI Basavaraj Suspended) ಆದೇಶ ಹೊರಡಿಸಿದ್ದಾರೆ. ರೌಡಿಸಂ ವಿರುದ್ಧ ಮೃದು ಧೋರಣೆ ತಳೆದರೆ ಇಲಾಖೆಯಲ್ಲಿ ಜಾಗವಿಲ್ಲ ಎಂಬ ಖಡಕ್ ಸಂದೇಶವನ್ನು ಎಸ್‌ಪಿ ಈ ಮೂಲಕ ರವಾನಿಸಿದ್ದಾರೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಬೆಂಗಳೂರು ಮಹಾನಗರ ಪಾಲಿಕೆಯ ಹದಗೆಟ್ಟ ರಸ್ತೆಗಳಿಗೆ ಮುಕ್ತಿ? ರಸ್ತೆಗಳ ಅಭಿವೃದ್ಧಿಗೆ ಬರೋಬ್ಬರಿ ₹2,000 ಕೋಟಿ ವಿಶೇಷ ಅನುದಾನ ಘೋಷಣೆ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ