ಬೆಂಗಳೂರಿಗರೇ ಗಮನಿಸಿ: ಜುಲೈ 4 ಮತ್ತು 5 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ 6 ಗಂಟೆಗೂ ಹೆಚ್ಚು ಕಾಲ ಕರೆಂಟ್ ಕಟ್!
ವರದಿಗಾರರು (Reporter)
Hemanth Rajashekar02:45 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕರೇ ಗಮನಿಸಿ, ನೀವೇನಾದರೂ ವಾರಾಂತ್ಯದ ದಿನಗಳಲ್ಲಿ ಪ್ರಮುಖ ಕೆಲಸಗಳನ್ನು ಯೋಜಿಸುತ್ತಿದ್ದರೆ ನಿಮಗೊಂದು ಪ್ರಮುಖ ಸುದ್ದಿ ಇಲ್ಲಿದೆ. ಕರ್ನಾಟಕ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಹಮ್ಮಿಕೊಳ್ಳಲಾಗಿರುವ ತುರ್ತು ಸಾಪ್ತಾಹಿಕ ಹಾಗೂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಜುಲೈ 4 ಮತ್ತು ಜುಲೈ 5 ರಂದು ಬೆಂಗಳೂರಿನ ಹಲವು ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ದೀರ್ಘಕಾಲ ವಿದ್ಯುತ್ ಪೂರೈಕೆಯಲ್ಲಿ (Power Outage) ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಪ್ರಕಟಣೆಯಲ್ಲಿ ತಿಳಿಸಿದೆ.
ಮಳೆಗಾಲದ ಅವಧಿಯಲ್ಲಿ ಯಾವುದೇ ಅಡಚಣೆಯಿಲ್ಲದೆ ವಿದ್ಯುತ್ ಜಾಲವನ್ನು ಸುಸ್ಥಿತಿಯಲ್ಲಿಡಲು ಈ ತುರ್ತು ದುರಸ್ತಿ ಮತ್ತು ಮೇಲ್ದರ್ಜೆಗೇರಿಸುವ ಕಾರ್ಯ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿಮ್ಮ ಏರಿಯಾಗಳಲ್ಲಿ ಯಾವ ಸಮಯದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜುಲೈ 4 ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? (ಸಮಯ: ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ)
ಶನಿವಾರದಂದು ಕೆಪಿಟಿಸಿಎಲ್‌ನ 66/11 ಕೆವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ನಡೆಯಲಿದ್ದು, ಈ ಕೆಳಗಿನ ಸುತ್ತಮುತ್ತಲಿನ ಪ್ರದೇಶಗಳು ಬಾಧಿತಗೊಳ್ಳಲಿವೆ:
- ಶೋಭಾ ಸಿಟಿ (Sobha City)
- ಆರ್. ಕೆ. ಹೆಗಡೆ ನಗರ (RK Hegde Nagar)
- ಕೋಗಿಲು (Kogilu)
- ಬೆಳ್ಳಹಳ್ಳಿ (Bellahalli)
- ತಿರುಮೇನಹಳ್ಳಿ (Thirumenahalli)
- ಚೊಕ್ಕನಹಳ್ಳಿ (Chokkanahalli)
- ಮತ್ತು ಇವುಗಳ ಸುತ್ತಮುತ್ತಲಿನ ವಸತಿ ಪ್ರದೇಶಗಳು.

ಜುಲೈ 5 ರಂದು ಎಲ್ಲೆಲ್ಲಿ ಕರೆಂಟ್ ಇರಲ್ಲ? (ಸಮಯ: ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ)
ಭಾನುವಾರ ಕಂಠೀರವ ಹಾಗೂ ಆರ್‌ಬಿಐ ಉಪಕೇಂದ್ರದ ವ್ಯಾಪ್ತಿಯಲ್ಲಿ ಕೇಂದ್ರ ಭಾಗದ ಪ್ರಮುಖ ಕಚೇರಿ ಹಾಗೂ ವಾಣಿಜ್ಯ ವಲಯಗಳಲ್ಲಿ ತಾಂತ್ರಿಕ ಕೆಲಸಗಳು ನಡೆಯಲಿವೆ. ಹೀಗಾಗಿ ಈ ಪ್ರದೇಶಗಳಲ್ಲಿ ವಿದ್ಯುತ್ ಕೈಕೊಡಲಿದೆ:
- ಕಬ್ಬನ್‌ಪೇಟೆ (Cubbonpet)
- ನೃಪತುಂಗ ರಸ್ತೆ (Nrupathunga Road)
- ಯುವಿಸಿಇ (UVCE) ಮತ್ತು ಕೃಷಿ ಕಚೇರಿ ಸುತ್ತಮುತ್ತ
- ಕೆ. ಜಿ. ರಸ್ತೆ (KG Road)
- ಎಸ್. ಪಿ. ರಸ್ತೆ (SP Road)
- ಎಸ್. ಜೆ. ಪಿ. ರಸ್ತೆ (SJP Road)
- ಓ. ಟಿ. ಸಿ. ರಸ್ತೆ (OTC Road)
- ಆರ್ ಬಿ ಐ (RBI) ಮತ್ತು ಸುತ್ತಮುತ್ತಲಿನ ಸರ್ಕಾರಿ ಹಾಗೂ ವಾಣಿಜ್ಯ ಲೇಔಟ್‌ಗಳು.
ಬೆಸ್ಕಾಂ ಜಾಗೃತಿ ಸೂಚನೆ: ವಿದ್ಯುತ್ ಕಡಿತಗೊಳ್ಳುವ ಮುನ್ನವೇ ಸಾರ್ವಜನಿಕರು ಮನೆಯ ವಾಟರ್ ಪಂಪ್‌ಗಳನ್ನು ಆನ್ ಮಾಡಿ ನೀರು ಸಂಗ್ರಹಿಸಿಕೊಳ್ಳಲು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಬ್ಯಾಕ್‌ಅಪ್ ವ್ಯವಸ್ಥೆಯನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: