ನಮ್ಮ ಬೆಂಗಳೂರು

ಬೆಂಗಳೂರು ಕಸದ ಸಮಸ್ಯೆಗೆ ಬ್ರೇಕ್: ಆರ್‌.ಎಫ್.ಐ.ಡಿ ಟ್ರ್ಯಾಕಿಂಗ್, 180 ಸಿಸಿಟಿವಿ ಕ್ಯಾಮೆರಾ ಹಾಗೂ ಸಂಕಲ್ಪ ಆ್ಯಪ್ ಜಾರಿ – ಸರ್ಕಾರದ ಬಿಗ್ ಪ್ಲಾನ್!

Hemanth Rajashekar

ವರದಿಗಾರರು (Reporter)

Hemanth Rajashekar

06:44 AM IST

ಬೆಂಗಳೂರು ಕಸದ ಸಮಸ್ಯೆಗೆ ಬ್ರೇಕ್: ಆರ್‌.ಎಫ್.ಐ.ಡಿ ಟ್ರ್ಯಾಕಿಂಗ್, 180 ಸಿಸಿಟಿವಿ ಕ್ಯಾಮೆರಾ ಹಾಗೂ ಸಂಕಲ್ಪ ಆ್ಯಪ್ ಜಾರಿ – ಸರ್ಕಾರದ ಬಿಗ್ ಪ್ಲಾನ್!

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರತಿದಿನ ಸೃಷ್ಟಿಯಾಗುವ ಘನತ್ಯಾಜ್ಯ ನಿರ್ವಹಣೆ ಮತ್ತು ಕಸ ವಿಲೇವಾರಿ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ದಕ್ಷಗೊಳಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವಾಲಯ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ನಗರದಾದ್ಯಂತ ಕಸ ಸಂಗ್ರಹಣೆ ಮಾಡುವ ವಾಹನಗಳ ಚಲನವಲನ ಗಮನಿಸಲು ಆರ್‌ಎಫ್‌ಐಡಿ (RFID – Radio Frequency Identification) ತಂತ್ರಜ್ಞಾನ, ಜಿಪಿಎಸ್ ಮತ್ತು ವಿಶೇಷವಾಗಿ ‘ಸಂಕಲ್ಪ’ (Sankalpa) ಆ್ಯಪ್ ಬಳಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ ಅವರು ಕೇಳಿದ ಪ್ರಶ್ನೆಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಶ್ರೀ ಕೃಷ್ಣ ಬೈರೇಗೌಡ ಅವರು ನೀಡಿದ ಲಿಖಿತ ಉತ್ತರದಲ್ಲಿ ಈ ಎಲ್ಲಾ ಪ್ರಮುಖ ವಿಷಯಗಳು ಬಹಿರಂಗವಾಗಿವೆ.

ಆರ್‌.ಎಫ್.ಐ.ಡಿ ಮತ್ತು ಸಂಕಲ್ಪ ಆ್ಯಪ್ ಬಳಕೆ

ನಗರದಲ್ಲಿ ಕಸ ಸಂಗ್ರಹಣೆಗೆ ಬರುವ ವಾಹನಗಳಿಗೆ ಸೂಕ್ತ ಟ್ರ್ಯಾಕಿಂಗ್ ವ್ಯವಸ್ಥೆ ರೂಪಿಸಲು ಘನತ್ಯಾಜ್ಯ ವಾಹನಗಳಿಗೆ ಆರ್‌ಎಫ್‌ಐಡಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಹೊಸದಾಗಿ ‘ಸಂಕಲ್ಪ ಆ್ಯಪ್’ ಸಿದ್ಧಪಡಿಸಲಾಗಿದ್ದು, ಇದನ್ನು ಪ್ರಯೋಗಾತ್ಮಕ ಹಂತದಲ್ಲಿ ಜಾರಿಗೆ ತರಲಾಗಿದೆ. ತ್ಯಾಜ್ಯ ರವಾನಿಸುವ ಕಾಂಪ್ಯಾಕ್ಟರ್ ವಾಹನಗಳ ನೈಜ ಸಮಯದ ಲೊಕೇಷನ್ ತಿಳಿಯಲು ಜಿಪಿಎಸ್ (GPS) ಅಳವಡಿಕೆಗೆ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ.

ಮನೆ-ಮನೆಯಿಂದ ಆಟೋಟೈಪರ್ ಮೂಲಕ ತ್ಯಾಜ್ಯ ಸಂಗ್ರಹ

ಸಾರ್ವಜನಿಕರಿಗೆ ಬಾಸೆಟ್‌ಗಳನ್ನು ವಿತರಿಸುವ ಬದಲಾಗಿ ಪಾಲಿಕೆ ವತಿಯಿಂದ ನೇರವಾಗಿ ಆಟೋಟೈಪರ್‌ಗಳ ಮೂಲಕ ಮನೆ-ಮನೆಯಿಂದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಪೌರಕಾರ್ಮಿಕರು ರಸ್ತೆ ಬದಿಯಲ್ಲಿ ಗುಡಿಸಿದ ಕಸವನ್ನು ಸುರಕ್ಷಿತವಾಗಿ ಆಟೋಟೈಪರ್‌ಗಳಿಗೆ ತಲುಪಿಸಲು ಅನುಕೂಲವಾಗುವಂತೆ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಜಂಬೋ ಬ್ಯಾಗ್‌ಗಳನ್ನು ವಿತರಿಸಲಾಗಿದೆ.

ಬ್ಲಾಕ್ ಸ್ಪಾಟ್ ನಿಯಂತ್ರಣಕ್ಕೆ 180 ಸಿಸಿಟಿವಿ ಕ್ಯಾಮೆರಾಗಳು ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಸ ಬಿಸಾಡುವ Black Spots ಪ್ರದೇಶಗಳನ್ನು ಗುರುತ್ತಿಸಲಾಗಿದ್ದು, ಅಂತಹ ಜಾಗಗಳಲ್ಲಿ ಕಸ ಹಾಕುವುದನ್ನು ತಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಈಗಾಗಲೇ 180 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಮೂಲಕ ಕಸ ಬಿಸಾಡುವವರ ಮೇಲೆ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ರಾಜಕಾಲುವೆ ಹಾಗೂ ಚರಂಡಿ ಶುಚಿತ್ವ ನಗರದಲ್ಲಿ ಕಸದಿಂದಾಗಿ ಚರಂಡಿ ಮತ್ತು ರಾಜಕಾಲುವೆಗಳು ಮುಚ್ಚಿ ಹೋಗಿ ಜಲಮಾಲಿನ್ಯ ಉಂಟಾಗುವುದನ್ನು ತಡೆಯಲು ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಮೂಲಕ ಕ್ರಮ ಕೈಗೊಳ್ಳಲಾಗಿದೆ. ರಾಜಕಾಲುವೆ ಮತ್ತು ಚರಂಡಿಗಳಿಗೆ ಕಸ ಬೀಳದಂತೆ ಗ್ರಿಲ್ (Grill) ಶಾಖೆಗಳನ್ನು ಅಳವಡಿಸಲಾಗಿದ್ದು, ನಿಯತಕಾಲಿಕವಾಗಿ ‘ಡಿಸಿಲ್ಟಿಂಗ್’ (Desilting) ಕಾಮಗಾರಿಗಳನ್ನು ನಡೆಸಿ ಕಸದ ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಲಾಗುತ್ತಿದೆ.

ಸರ್ಕಾರದ ಈ ನೂತನ ತಂತ್ರಜ್ಞಾನ ಆಧಾರಿತ ಕ್ರಮಗಳಿಂದಾಗಿ ಬೆಂಗಳೂರಿನ ನೈರ್ಮಲ್ಯ ಮಟ್ಟ ಸುಧಾರಿಸಲಿದ್ದು, ಕಸ ವಿಲೇವಾರಿ ಪ್ರಕ್ರಿಯೆಗೆ ಹೊಸ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಮಹರ್ಷಿ ವಾಲ್ಮೀಕಿ ಮೂರ್ತಿ ಬಳಿ ಬಿಜೆಪಿ ಧರಣಿ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನ ಸೌಧಕ್ಕೆ ಪಾದಯಾತ್ರೆ.

“FIR ದಾಖಲಾದರೂ ಸರಿ, ನೈಸ್ ರಸ್ತೆ ಟೋಲ್ ಕಟ್ಟಬೇಡಿ!” – ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ!

ರಾಜಸ್ಥಾನದ ಶಾಲೆಯಲ್ಲಿ ‘ಸ್ಕೂಲ್ ಠೀಕ್ ಕರೋ’ ಅಭಿಯಾನಕ್ಕೆ ತೀವ್ರ ಪ್ರತಿರೋಧ! CJP ನಿಯೋಗವನ್ನು ಓಡಿಸಿ ಕಲ್ಲು ತೂರಿದ ಬಗ್ರೂ ಗ್ರಾಮಸ್ಥರು.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ