ಡಿಸಿಎಂ ಡಿಕೆಶಿ ಮತ್ತೆ ಶುರುವಾಯ್ತು ಸಿಬಿಐ ಸಂಕಷ್ಟ..!

ಡಿಸಿಎಂ ಡಿಕೆಶಿ ಮತ್ತೆ ಶುರುವಾಯ್ತು ಸಿಬಿಐ ಸಂಕಷ್ಟ..!

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಿಬಿಐ ತನಿಖೆ ರದ್ದುಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ, ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಸಿಬಿಐ ತನಿಖೆಗೆ ಅನುಮತಿ ನೀಡಿರುವ ಕೋರ್ಟ್, 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚಿಸಿದೆ. ಸಿಬಿಐ ವಾದಕ್ಕೆ ಮಣ್ಣನೆ ನೀಡಿ, ಡಿ.ಕೆ.ಶಿವಕುಮಾರ್ ತಡವಾಗಿ ಅರ್ಜಿ ಸಲ್ಲಿಸಿದ್ದಾರೆ ಅಂತಾ ಅರ್ಜಿಯನ್ನು ವಜಾಗೊಳಿಸಿದೆ. ಶೀಘ್ರದಲ್ಲೇ ಅರ್ಧಕ್ಕೆ ನಿಂತಿದ್ದ ಸಿಬಿಐ ವಿಚಾರಣೆ ಮುಂದುವರಿಯಲಿದೆ. ಅಲ್ಲದೇ, ತನಿಖೆ ಅಂತಿಮ‌ ಹಂತಕ್ಕೆ ಬಂದ ಹಿನ್ನೆಲೆ ಪ್ರಕರಣ ಸಂಬಂಧ ಶೀಘ್ರದಲ್ಲೇ ಚಾರ್ಜ್‌‌ಶೀಟ್‌ ಸಲ್ಲಿಕೆ ಮಾಡುವ ಸಾಧ್ಯತೆಯೂ ಇದೆ.

ಏನಿದು ಪ್ರಕರಣ..?

ಇನ್ನು, ಡಿಸಿಎಂ ಡಿ.ಕೆ.ಶಿವಕುಮಾರ್, ಅಕ್ರಮ ಹಣ ಗಳಿಕೆ ಆರೋಪ ಎದುರಿಸುತ್ತಿದ್ದಾರೆ. 2014-2018ರವರೆಗೆ ಅಕ್ರಮ ಆಸ್ತಿ ಗಳಿಸಿದ್ದು, 75 ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಅಂತಾ ಆರೋಪವಿದೆ. ಈ ಬಗ್ಗೆ ಸಿಬಿಐ ಕೈಗೊಂಡಿದ್ದ ತನಿಖೆ ವೇಳೆ 200 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿತ್ತು.

‘ಲೋಕ’ ಸಮರದ ಹೊತ್ತಲ್ಲೇ ಡಿಕೆಶಿಗೆ ಸಿಬಿಐ ಸಂಕಷ್ಟ

ಇನ್ನು, ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈಗಾಗ್ಲೇ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಈ ಮಧ್ಯೆ ಸಿಬಿಐ ತನಿಖೆ ಶುರುವಾದ್ರೆ ಡಿಕೆಶಿ ಚುನಾವಣಾ ಸಿದ್ಧತೆಗೆ ಹಿನ್ನಡೆಯಾಗಲಿದೆ. ರಾಜ್ಯದಲ್ಲೂ ಲೋಕಸಭಾ ಚುನಾವಣೆ ಸಿದ್ಧತೆಗೆ ಹಿನ್ನಡೆ ಆಗಲಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ಜವಾಬ್ದಾರಿ ಹೊತ್ತಿರುವ ಡಿಕೆಶಿ, ಸಿಬಿಐ ಕರೆದಾಗಲೆಲ್ಲಾ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಬಹುದು. ಪಕ್ಷ ಸಂಘಟನೆ ಮತ್ತು ಸರ್ಕಾರದಲ್ಲಿ ಆ್ಯಕ್ಟಿವ್ ಆಗಿರುವ ಡಿಕೆಶಿ ವಿರುದ್ಧ ಸಿಬಿಐ ವಿಚಾರಣೆಯಿಂದ ವಿಪಕ್ಷಗಳಿಗೆ ಡಿಕೆಶಿ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

Vinkmag ad

Read Previous

ದೇಶದ ಶಾಸಕರ ಪೈಕಿ ಡಿಕೆಶಿ ನಂಬರ್ ಒನ್ ಶ್ರೀಮಂತ..! ಒಟ್ಟು ಆಸ್ತಿ ಎಷ್ಟು ಗೊತ್ತಾ..?

Read Next

ನಮ್ಮ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಮೋದಿ ಚಾಲನೆ

Leave a Reply

Your email address will not be published. Required fields are marked *

Most Popular